ಟಿಪ್ಪು ಸಾಧನೆ ಕುರಿತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೊಗಳಿಕೆ: ಬಿಜೆಪಿ ನಾಯಕರಿಗೆ ಬೇಸರ

ಟಿಪ್ಪು ಸಾಧನೆ ಕುರಿತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೊಗಳಿಕೆ: ಬಿಜೆಪಿ ನಾಯಕರಿಗೆ ಬೇಸರ

206
0
SHARE

ಬೆಂಗಳೂರು(ಅ,25,2017): ರಾಜ್ಯ ಸರ್ಕಾರ ಆಚರಣೆ ಮಾಡುತ್ತಿರುವ ಟಿಪ್ಪು ಸುಲ್ತಾನ್ ಜಯಂತಿಯನ್ನ ಬಿಜೆಪಿಯವರು ವಿರೋಧಿಸುತ್ತಿದ್ದರೇ, ಆದರೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟಿಪ್ಪು ಸಾಧನೆ ಬಗ್ಗೆ ಕೊಂಡಾಡಿದ್ದು ಬಿಜೆಪಿ ನಾಯಕರಿಗೆ ಬೇಸರ ಉಂಟುಮಾಡಿದೆ.

ಈ ಘಟನೆ ವಿಧಾನಸೌಧದ ವಜ್ರಮಹೋತ್ಸವ ಆಚರಣೆಯ ಹಿನ್ನೆಲೆ ಇಂದು ವಿಧಾನಮಂಡಲದಲ್ಲಿ ವಿಶೇಷ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟಿಪ್ಪು ಸುಲ್ತಾನ್ ರ ಸಾಧನೆ, ಶೌರ್ಯವನ್ನು ಕುರಿತು ಹೊಗಳಿದರು.

ಟಿಪ್ಪು ಸುಲ್ತಾನ್ ಓರ್ವ ಅಪ್ರತಿಮ ವೀರರಾಗಿದ್ದರು.ರಾಕೆಟ್ ತಂತ್ರಜ್ಞಾನದ ಜನಕ ಟಿಪ್ಪು.ಬ್ರಿಟೀಷರ ವಿರುದ್ದ ಹೋರಾಡಿ ವೀರಮರಣವನ್ನಪ್ಪಿದರು ಎಂದು ರಾಷ್ಟ್ರಪತಿ ರಾಮಾನಾಥ್ ಕೋವಿಂದ್ ಬಣ್ಣಿಸಿದರು.

ಟಿಪ್ಪು ಹೆಸರು ಪ್ರಸ್ತಾಪಿಸುತ್ತಿದ್ದಂತೆ ಕಾಂಗ್ರೆಸ್ ಶಾಸಕರು ಮೇಜುಕುಟ್ಟಿ ಸ್ವಾಗತಿಸಿದರೆ,ಬಿಜೆಪಿ ಶಾಸಕರು,ಸಂಸದರು ಪೆಚ್ಚು ಮೋರೆ ಹಾಕಿಕೊಂಡು ಕುಳಿತಿದ್ದರು.ಟಿಪ್ಪು ಜಯಂತಿ ಆಚರಣೆಯನ್ನ ರಾಜ್ಯ ಬಿಜೆಪಿ ನಾಯಕರು ವಿರೋಧಿಸುತ್ತಿರುವ ಬೆನ್ನಲ್ಲೆ ರಾಷ್ಟ್ರಪತಿ ರಾಮಾನಾಥ್ ಕೋವಿಂದ್ ಟಿಪ್ಪು ಶ್ಲಾಘನೆ ಮಹತ್ವ ಪಡೆದಿದೆ. ಇನ್ನೊಂದೆಡೆ ರಾಷ್ಟ್ರಪತಿ ಅವರ ಬಾಯಿಂದಲೇ ಟಿಪ್ಪು ಸುಲ್ತಾನ್ ರನ್ನ ರಾಜ್ಯ ಸರ್ಕಾರ ಹೊಗಳಿಸಿತೆ ಎಂಬ ಪ್ರಶ್ನೆ ಎಲ್ಲರಲ್ಲಿ ಹುಟ್ಟಿಕೊಳ್ಳುತ್ತಿದೆ.

NO COMMENTS

LEAVE A REPLY