ಕಂಡೆಕ್ಟರ್ ನ ಬೆಜಾವಬ್ದಾರಿ: ವಿದ್ಯಾರ್ಥಿ ಕಾಲಿನ ಮೇಲೆ ಹರಿದ ಬಸ್ ಚಕ್ರ

ಕಂಡೆಕ್ಟರ್ ನ ಬೆಜಾವಬ್ದಾರಿ: ವಿದ್ಯಾರ್ಥಿ ಕಾಲಿನ ಮೇಲೆ ಹರಿದ ಬಸ್ ಚಕ್ರ

235
0
SHARE

ಮೈಸೂರು(ಅ,24,2017): ಬಸ್ ಕಂಡೆಕ್ಟರ್ ನ ಬೆಜಾವಬ್ದಾರಿತನಯಿಂದ ವಿದ್ಯಾರ್ಥಿಯೊಬ್ಬ ಕಾಲು ಕಳೆದುಕೊಂಡಿರುವ ಅಮಾನವೀಯ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಸಿಟಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದಿದ್ದು, ಬನ್ನೂರಿನ ಉಲ್ಲೇಖ್ ಪುಟ್ಟಸ್ವಾಮಿ ಕಾಲು ಕಳೆದುಕೊಂಡ ವಿದ್ಯಾರ್ಥಿ.ಈತ ನಗರದ ಸದ್ವಿದ್ಯಾ ಪೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿಯಾಗಿದ್ದು, ಬಸ್ ಹತ್ತಲು ಮುಂದಾಗಿದ್ದಾನೆ, ಆದರೆ ಕಂಡಕ್ಟರ್ ಪಾಸ್ ಇಲ್ಲ ಅಂತಾ ಇತನನ್ನು ಬಸ್ ನಿಂದ ಹೊರ ದೂಡಿದ್ದಾರೆ.ಮತ್ತೋಮ್ಮೆ ಬಸ್ ಹತ್ತಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಚಾಲಕನು ವಿದ್ಯಾರ್ಥಿಗಳನ್ನ ತಡೆಯಲು ಬಾಗಿಲು ಹಾಕಿದ್ದು, ಈ ವೇಳೆ ಉಲ್ಲೇಖ್ ಬಸ್ ಚಕ್ರಕ್ಕೆ ಸಿಲುಕಿದ್ದು, ಕಾಲಿನ ಮೇಲೆ ಬಸ್ ಹರಿದಿದ್ದು ಕಾಲು ಮುರಿದಿದೆ.

ನಂತರ ವಿದ್ಯಾರ್ಥಿ ಉಲ್ಲೇಖ್ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು,ಶಸ್ತ್ರ ಚಿಕಿತ್ಸೆ ಮೂಲಕ ವ್ಯದ್ಯರು ತುಂಡರಿದ ಕಾಲನ್ನು ತೆಗೆದಿದ್ದಾರೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿದ್ಯಾರ್ಥಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಕೆಎಸ್ ಆರ್.ಟಿಸಿ ಬಸ್ ನಿರ್ವಾಹಕಹ ಹಾಗೂ ಚಾಲಕನ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಷಯ ಕುರಿತು ಶಿಸ್ತು ಕ್ರಮ ಕೈಗೊಳ್ಳುವಂತೆ ಸಾರಿಗೆ ಸಚಿವರಾದ ಎಂ.ರೆವಣ್ಣ ರವರು ಆದೇಶ ಹೂರಡಿಸಿದ್ದಾರೆ. ಹಾಗೂ ಬಾಲಕನ ಚಿಕಿತ್ಸಾ ಸಂಪೂರ್ಣ ವೆಚ್ಚವನ್ನು ಭರಿಸುವಂತೆ ಸೂಚಿಸಿದ್ದಾರೆ.

NO COMMENTS

LEAVE A REPLY