ಮಾಂಸ ಸೇವನೆ ಮಾಡಿ ದೇಗುಲಕ್ಕೆ ಹೋಗೋದು ತಪ್ಪಲ್ಲ: ಸಿ ಎಂ ಸಿದ್ದರಾಮಯ್ಯ

ಮಾಂಸ ಸೇವನೆ ಮಾಡಿ ದೇಗುಲಕ್ಕೆ ಹೋಗೋದು ತಪ್ಪಲ್ಲ: ಸಿ ಎಂ ಸಿದ್ದರಾಮಯ್ಯ

209
0
SHARE

ಧಾರವಾಡ(ಅ,23,2017): ಮಾಂಸ ಸೇವನೆ ಮಾಡಿ ದೇವಸ್ಥಾನಕ್ಕೆ ಬರಬೇಡಿ ಎಂದು ದೇವರು ಹೇಳಿಲ್ಲ, ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮೀನೂಟ ಸೇವಿಸಿ ಧರ್ಮಸ್ಥಳದ ಮಂಜುನಾಥನ ದರ್ಶನ ಮಾಡಿದ್ದನ್ನ ಸಮರ್ಥಿಸಿಕೊಂಡಿದ್ದಾರೆ.

ನಿನ್ನೆ ಬಂಟ್ವಾಳದಲ್ಲಿ ಸಿಎಂ ಸಿದ್ದರಾಮಯ್ಯ ಊಟದ ವೇಳೆ ಮೀನು ಸೇವನೆ ಮಾಡಿದ್ದರು. ಬಳಿಕ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದಿದ್ದರು. ಇದು ಮಾಧ್ಯಮಗಳಲ್ಲಿ ಪ್ರಸಾರವಾಗಿ ವಿವಾದಕ್ಕೆ ಕಾರಣವಾಗಿದೆ.

ಹೀಗಾಗಿ ಈ ಕುರಿತು ಇಂದು ಧಾರವಾಡದಲ್ಲಿ ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯ,ಮಾಂಸ ಸೇವನೆ ಮಾಡಿ ದೇಗುಲಕ್ಕೆ ಹೋಗೋದು ತಪ್ಪಲ್ಲ. ಬೇಡರಕಣ್ಣಪ್ಪನು ಶಿವನಿಗೆ ಜಿಂಕೆ ಮಾಂಸವನ್ನೇ ನೈವೇದ್ಯ ಮಾಡಿದ್ದನು. ಹೀಗಾಗಿ ಮಾಂಸಹಾರ ಸೇವನೆ ಮಾಡಿ ದೇವಸ್ಥಾನಕ್ಕೆ ಹೋಗೋದು ತಪ್ಪಲ್ಲ ಎಂದು ತಿಳಿಸಿದ್ದಾರೆ.

NO COMMENTS

LEAVE A REPLY