ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣಗಳಲ್ಲಿ ಇನ್ಮುಂದೆ ಸ್ವಚ್ಚತೆಯ ಶೌಚಾಲಯಗಳ ನಿರ್ಮಾಣ

ಕೆ ಎಸ್ ಆರ್ ಟಿಸಿ ಬಸ್ ನಿಲ್ದಾಣಗಳಲ್ಲಿ ಇನ್ಮುಂದೆ ಸ್ವಚ್ಚತೆಯ ಶೌಚಾಲಯಗಳ ನಿರ್ಮಾಣ

259
0
SHARE

ಬೆಂಗಳೂರು(ಅ,23,2017): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ದೂರದೂರುಗಳಿಗೆ ಹೋಗುವ ತನ್ನ ಪ್ರಯಾಣಿಕರಿಗೆ ಸ್ವಚ್ಚತೆಯಿಂದ ಕೂಡಿರುವ ಶೌಚಾಲಯಗಳ ಒದಗಿಸಲು ಮುಂದಾಗಿದೆ.

ಕೆ ಎಸ್ ಆರ್ ಟಿಸಿ ಬಸ್ ಗಳಲ್ಲಿ ದೂರದೂರುಗಳಿಗೆ ಹೋಗುವ ಪ್ರಯಾಣಿಕರಿಗೆ ಹೆದ್ದಾರಿಗಳಲ್ಲಿ ರಸ್ತೆಬದಿಯಲ್ಲಿನ ಪ್ಲಾಜಾ ಅಥಾವಾ ಹೋಟೇಲ್ ಗಳಲ್ಲಿ ಸುಶಿಕ್ಷಿತ ಹಾಗೂ ಸ್ವಚ್ಚತೆಯಿಂದ ಕೂಡಿರುವ ಯಾವುದೇ ರೀತಿಯ ಶೌಚಾಲಯಗಳ ವ್ಯವಸ್ಥೆಯಿಲ್ಲದೆ, ತೀರಾ ಕಳಪೆ ಗುಣಮಟ್ಟದಿಂದ ಕೂಡಿರುವ ಶೌಚಾಲಯಗಳಿರುವುದರಿಂದ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ.ಮದ್ದೂರು, ಭದ್ರಾವತಿ, ಸಕಲೇಶಪುರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಬಸ್ ನಿಲ್ದಾಣಗಳ ಶೌಚಾಲಯಗಳಲ್ಲಿ ಅಕ್ರಮವಾಗಿ ಹಣ ಸಂಗ್ರಹಿಸಲಾಗುತ್ತಿದೆ ಎಂದು ಪ್ರಯಾಣಿಕರು ಹಲವು ಭಾರಿ ದೂರು ನೀಡಿದ್ದಾರೆ.ಹಾಗೆಯೇ ಕೆ ಎಸ್ ಆರ್ ಟಿಸಿ ವಿರುದ್ಧ ಹಲವು ಆಕ್ರೋಶಗಳು ವ್ಯಕ್ತವಾಗುತ್ತಿವೆ.

ಈ ಕಾರಣ ಕೆ ಎಸ್ ಆರ್ ಟಿಸಿ ಈ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿದ್ದು, ಸುಲಭ್ ಇಂಟರ್ ನ್ಯಾಷನಲ್ ನಂತಹ ಏಜೆನ್ಸಿ ಗಳಿಗೆ ಬಸ್ ನಿಲ್ದಾಣಗಳಲ್ಲಿನ ಶೌಚಾಲಯಗಳ ನಿರ್ವಹಣೆ ಜವಾಬ್ದಾರಿ ನೀಡಲು ನಿರ್ಧರಿಸಿದೆ. ಈ ಕುರಿತು ಕೆ ಎಸ್ ಆರ್ ಟಿಸಿ ಮಂಡಳಿ ಮುಂದೆ ಪ್ರಸ್ತಾವನೆಯನ್ನು ಕೂಡ ಸಲ್ಲಿಸಲಾಗಿದೆ. ಮಂಡಳಿ ಮುಂದಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಿದೆ ಎಂದು ಕೆ ಎಸ್ ಆರ್ ಟಿಸಿ, ಎಂ ಡಿ ಉಮಾಶಂಕರ್ ತಿಳಿಸಿದ್ದಾರೆ.

NO COMMENTS

LEAVE A REPLY