ಮರಳು ಕಲಾವಿದೆ ಗೌರಿ ಪೋಷಕರ ಹಲ್ಲೆ ಪ್ರಕರಣಕ್ಕೆ ಸಂಭಂದಿಸಿದಂತೆ ಮೂವರ ಬಂಧನ

ಮರಳು ಕಲಾವಿದೆ ಗೌರಿ ಪೋಷಕರ ಹಲ್ಲೆ ಪ್ರಕರಣಕ್ಕೆ ಸಂಭಂದಿಸಿದಂತೆ ಮೂವರ ಬಂಧನ

193
0
SHARE

ಮೈಸೂರು(ಅ,22,2017):  ಮರಳು ಮ್ಯೂಸಿಯಂ ತೆರವು ಗೊಳಸುವಂತೆ ಮರಳು ಕಲಾವಿದೆ ಗೌರಿ ಪೋಷಕರ ಮೇಲೆ ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ನಜರಬಾದ್ ಠಾಣಾ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ.

ನಜೀರ್ ಅಹ್ಮದ್, ಎಜಾರ್ ಪಾಷಾ ಸೇರಿ ಮೂವರು ಬಂಧಿತ ಆರೋಪಿಗಳು. ಈ ಮೂವರು ಆರೋಪಿಗಳು ರೇಶಮ್ ಸಿಲ್ಕ್ ಉದ್ಯೋಗ ಅಂಗಡಿಯವರ ಜತೆ ಕೈಗೂಡಿಸಿ ಮರಳು ಕಲಾವಿದೆ ಗೌರಿ ಪೋಷಕರ ಮೇಲೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ.

ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿರುವ ದೇಶದ ಏಕೈಕ ಮರಳು ಮ್ಯೂಸಿಯಂ ತೆರವು ಗೊಳಿಸುವಂತೆ ಖ್ಯಾತ ಮರಳು ಕಲಾವಿದೆಗೆ ಗೌರಿ ಅವರ ತಾಯಿ ನಾಗಲಾಂಬಿಕ, ಹಾಗೂ ತಂದೆ ನಂಜುಂಡಸ್ವಾಮಿಗೆ  ನಿನ್ನೆ ದುಷ್ಕರ್ಮಿಗಳು ತೀವ್ರವಾಗಿ ಥಳಿಸಿದ್ದರು. ವೃದ್ಧ ದಂಪತಿಯನ್ನು ಥಳಿಸುತ್ತಿರುವ ದೃಶ್ಯ ಸಿ ಸಿ ಟಿವಿಯಲ್ಲಿ ಸೆರೆಯಾಗಿತ್ತು. 

ಅಲ್ಲದೆ ಜೀವ ಉಳಿಸಿಕೊಂಡು ಬದುಕಬೇಕು ಅಂದ್ರೆ ಜಾಗ ಖಾಲಿ ಮಾಡಿ ಎಂದು ದುಷ್ಕರ್ಮಿಗಳು ಮರಳು ಕಲಾವಿದೆ ಗೌರಿ ತಂದೆ ತಾಯಿಗೆ  ಪ್ರಾಣಬೆದರಿಕೆ ಬೆದರಿಕೆ ಹಾಕಿದ್ದರು. ಹಾಗೂ ಪಕ್ಕದ ರೇಶಮ್ ಸಿಲ್ಕ್ ಉದ್ಯೋಗ ಅಂಗಡಿಯವರು ಥಳಿಸಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಈ ಕುರಿತು ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ.

NO COMMENTS

LEAVE A REPLY