ಟಿಪ್ಪು ಜಯಂತಿ ಆಚರಣೆ ತಡೆಯಲು ಯುವ ಮೋರ್ಚಾದಿಂದ ಹೋರಾಟ: ಸಂಸದ ಪ್ರತಾಪ್ ಸಿಂಹ

ಟಿಪ್ಪು ಜಯಂತಿ ಆಚರಣೆ ತಡೆಯಲು ಯುವ ಮೋರ್ಚಾದಿಂದ ಹೋರಾಟ: ಸಂಸದ ಪ್ರತಾಪ್ ಸಿಂಹ

275
0
SHARE

ಮೈಸೂರು(ಅ,21,2017): ರಾಜ್ಯ ಸರ್ಕಾರ ಆಚರಿಸಲು ಮುಂದಾಗಿರುವ ಬೇಡವಾಗಿದ್ದ ಟಿಪ್ಪು ಜಯಂತಿ ಆಚರಣೆಯನ್ನ ನಿಲ್ಲಿಸಲು ಬಿಜೆಪಿ ಯುವಮೋರ್ಚಾದಿಂದ ಹೋರಾಟ ಮಾಡಲಾಗುತ್ತದೆ. ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಟಿಪ್ಪು ಜಯಂತಿಯನ್ನ ಬಿಜೆಪಿ ವಿರೋಧಿಸುತ್ತದೆ. ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮತ್ತು ಸಂಸದೆ ಶೋಭಾ ಕರಂದ್ಲಾಜೆ ನಿಲುವಿಗೆ ಒಮ್ಮತವಿದೆ. ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಬೇಡಿ ಎಂದು 2 ವರ್ಷಗಳಿಂದ ಪತ್ರ ಬರೆಯಲಾಗುತ್ತಿದೆ. ಆದರೆ ಶಿಷ್ಟಾಚಾರ ಹಿನ್ನೆಲೆ ನಮ್ಮ ಹೆಸರು ಹಾಕುತ್ತಿದ್ದಾರೆ‌‌.

ಟಿಪ್ಪು ಸುಲ್ತಾನ್ ಏನೂ ಸ್ವಾತಂತ್ರ ಹೋರಾಟಗಾರನಲ್ಲ. ಟಿಪ್ಪು ಕನ್ನಡ ಉಳುವಿಗಾಗಿ ಏನೂ ಮಾಡಿಲ್ಲ. ಹೀಗಾಗಿ ಜನರಿಗೆ ಟಿಪ್ಪು ಜಯಂತಿ ಆಚರಣೆಯಿಂದ ಯಾವುದೇ ಸಂದೇಶವಿಲ್ಲ. ಅದ್ದರಿಂದ ಟಿಪ್ಪು ಜಯಂತಿ ಆಚರಣೆ ತಡೆಯಲು ಯುವ ಮೋರ್ಚಾದಿಂದ ಹೋರಾಟ ಮಾಡಲಾಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

NO COMMENTS

LEAVE A REPLY