ಸಿಸಿಬಿ ಪೊಲೀಸರ ದಾಳಿ: ರೌಡಿ ಶೀಟರ್ ರಾಜು ಕಾಲಿಗೆ ಗುಂಡು

ಸಿಸಿಬಿ ಪೊಲೀಸರ ದಾಳಿ: ರೌಡಿ ಶೀಟರ್ ರಾಜು ಕಾಲಿಗೆ ಗುಂಡು

259
0
SHARE

ಬೆಂಗಳೂರು(ಅ,21,2017): ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸ ಮತ್ತೆ ಮುಂದುವರೆದಿದ್ದು, ಕಡಿವಾಣ ಹಾಕುವ ನಿಟ್ಟಿನಲ್ಲಿ ಸಿಸಿಬಿ ಪೊಲೀಸರು ರೌಡಿಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಈ ಇನ್ನಲೆಯಲ್ಲಿ ಕುಖ್ಯಾತ ರೌಡಿ ರಾಜುದೊರೆ ಮೇಲೆ ಸಿಸಿಬಿ ಪೊಲೀಸರು ಸೋಲದೇವಹಹಳ್ಳಿ ಬಳಿ ಗುಂಡಿನ ದಾಳಿ ನಡೆಸಿದ್ದಾರೆ.

ಕೊಲೆ ಮತ್ತು ಕೊಲೆ ಯತ್ನ ಸೇರಿ ಸುಮಾರು 7 ಪ್ರಕರಣಗಳಲ್ಲಿ ಪೊಲೀಸರಿಗೆ ಈತ ಬೇಕಾಗಿದ್ದ. ಕೆ. ಆರ್. ಪುರಂ ಮತ್ತು ಇಂದಿರಾನಗರದ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಕೇಸ್‌ ದಾಖಲಾಗಿದ್ದವು. ಆದ್ದರಿಂದ ಸಿಸಿಬಿ ಪೊಲೀಸರು ರೌಡಿಶೀಟರ್‌ ರಾಜುದೊರೆ ನನ್ನು ಬಂಧಿಸಲು ತೆರಳಿದಾಗ ಆತ ಪೊಲೀಸರ ಮೇಲೆಯೇ ಪ್ರತಿ ದಾಳಿ ನಡೆಸಿದ್ದಾನೆ. ಮುಖ್ಯಪೇದೆ ನರಸಿಂಹಮೂರ್ತಿ ಎನ್ನುವವರಿಗೆ ಡ್ರ್ಯಾಗರ್‌ನಿಂದ ಇರಿದಿದ್ದಾನೆ. ಈ ವೇಳೆ ಆತ್ಮರಕ್ಷಣೆಗೆ ಇನ್ಸ್‌ಪೆಕ್ಟರ್‌ ಪ್ರಕಾಶ್‌ ರಾಥೋಡ್‌ ಅವರು ಗುಂಡು ಹಾರಿಸಿದ್ದಾರೆ. ರಾಜುದೊರೆಯ ಎಡಗಾಲಿಗೆ ಗುಂಡು ತಗುಲಿದೆ.

ರಾಜುದೊರೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.

NO COMMENTS

LEAVE A REPLY