ಹಿಂಬದಿ ಸವಾರರು ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುವಂತಿಲ್ಲ: ರಾಜ್ಯ ಸರ್ಕಾರ  ಹೊಸ ಆದೇಶ ತರಲು ನಿರ್ಧಾರ

ಹಿಂಬದಿ ಸವಾರರು ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುವಂತಿಲ್ಲ: ರಾಜ್ಯ ಸರ್ಕಾರ  ಹೊಸ ಆದೇಶ ತರಲು ನಿರ್ಧಾರ

257
0
SHARE

ಬೆಂಗಳೂರು(ಅ,21,2017): ಇನ್ನೂ ಮುಂದಿನ ದಿನಗಳಲ್ಲಿ ಹಿಂಬದಿ ಸವಾರರು ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುವಂತಿಲ್ಲ. 100 ಸಿಸಿ ವಾಹನಗಳಿಗೆ ಅನ್ವಯವಾಗುವಂತೆ ಹಿಂಬದಿ ಸವಾರರನ್ನು ನಿರ್ಬಂಧಿಸಲು ಸರ್ಕಾರ ಚಿಂತನೆ ನಡೆಸಿದೆ.

ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಅದರಲ್ಲೂ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಹಿಂಬದಿ ಕುಳಿತಿದ್ದ ಮಕ್ಕಳು ಸಾವನ್ನಪ್ಪಿರುವುದು, ಈ ಪ್ರಕರಣಗಳು ಹೆಚ್ಚಾಗಿ ದಾಖಲಾಗಿವೆ. ಇಂತಹ ಅನಾವುತವನ್ನು ತಪ್ಪಿಸಲು ರಾಜ್ಯ ಸರ್ಕಾರ  ಹೊಸ ಆದೇಶ ತರಲು ನಿರ್ಧರಿಸಿದೆ.  ಈ ಕುರಿತು ಹೈಕೋರ್ಟ್ ಗೆ ಸರ್ಕಾರ ಈಗಾಗಲೇ ಅಫಿಡವಿಟ್ ಸಲ್ಲಿಸಿದ್ದು ಒಂದು ವಾರದೊಳಗೆ ಅಧಿಕೃತ ಆದೇಶ ಹೊರ ಬೀಳುವ ಸಾಧ್ಯತೆ ಇದೆ.

ದ್ವಿಚಕ್ರ ವಾಹನದಲ್ಲಿ ಪ್ರತಿ ಬಾರಿಯೂ ಅಫಘಾತ ಸಂಭವಿಸಿದಾಗ ಹಿಂಬದಿ ಸವಾರರೇ ಹೆಚ್ಚು ಬಲಿಯಾಗುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ. ಸರ್ಕಾರದ ಈ ಆದೇಶ ಹೊಸದಾಗಿ ಖರೀದಿಸುವ ವಾಹನಗಳಿಗೆ ಮಾತ್ರ ಅನ್ವಯವಾಗುತ್ತೆ. ಒಂದೇ ಸೀಟು ಇರುವಂಥಹ ವಾಹನಗಳನ್ನು ನಿರ್ಮಿಸುವಂತೆ ಕಂಪನಿಗಳಿಗೆ ಸೂಚಿಸಲಾಗುತ್ತೆ. ಮೋಟಾರ್ ವಾಹನ ಕಾಯ್ದೆ ಯಲ್ಲಿ 100 ಸಿಸಿ ವಾಹನಗಳಲ್ಲಿ ಹಿಂಬದಿಯಲ್ಲಿ ಸವಾರಿ ಮಾಡುವಂತಿಲ್ಲ ಎಂಬ ನಿಯಮವಿದೆ. ಇದನ್ನು ಇಂಡಿಯನ್ ರೋಡ್ ಕಾಂಗ್ರೆಸ್ ಮನವಿ ಮೇರೆಗೆ ವಿನಾಯ್ತಿ ನೀಡಲಾಗಿತ್ತು. ಆದ್ರೆ ಮುಂದಿನ ದಿನಗಳಲ್ಲಿ ಆ ನಿಯಮವನ್ನು ಮತ್ತೆ ಜಾರಿಗೆ ತರಲಾಗುವುದು ಎಂದು ಸಾರಿಗೆ ಆಯುಕ್ತರು ಈ ಕುರಿತು ಸ್ಪಷ್ಟಪಡಿಸಿದ್ದಾರೆ.

NO COMMENTS

LEAVE A REPLY