ಜೂಜುಕೋರರ ಅಡ್ಡವಾದ ಬೀದರ್ ನ ವಿದ್ಯಾರ್ಥಿನಿಲಯ

ಜೂಜುಕೋರರ ಅಡ್ಡವಾದ ಬೀದರ್ ನ ವಿದ್ಯಾರ್ಥಿನಿಲಯ

253
0
SHARE

ಬೀದರ್(ಅ,20,2017): ಸರ್ಕಾರವು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಗೂ ಒಳ್ಳೆಯ ಭವಿಷ್ಯಕ್ಕಾಗಿ ಕೋಟಿ ಕೋಟಿ ಹಣ ಸುರಿಯುತ್ತಿದೆ. ಆದರೆ ಅಧಿಕಾರಿಗಳ ಮತ್ತು ರಾಜಕಾರಣಿಗಳ ನಿರ್ಲಕ್ಷ್ಯದಿಂದ ಅಂತಹ ಸವಲತ್ತುಗಳಿಂದ ವಿದ್ಯಾರ್ಥಿಗಳು ವಂಚಿತವಾಗುತ್ತಿದ್ದಾರೆ. ಇದಕ್ಕೆ ಬೀದರ್​ ಜಿಲ್ಲೆಯಲ್ಲಿರುವ ಈ ವಿದ್ಯಾರ್ಥಿನಿಲಯವೇ ​ಸಾಕ್ಷಿ.

ಪದವಿ ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿನಿಯರಿಗಾಗಿ ನಿರ್ಮಿಸಿದ ವಸತಿ ನಿಲಯ ಜೂಜುಕೋರರ, ಸಮಾಜ ಘಾತುಕರ ಪಾಲಾಗಿದೆ. ಗುಲ್ಬರ್ಗಾ ವಿವಿ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅನುಕೂಲವಾಗಲೆಂದು,  ಸರ್ಕಾರ 2010-11ರಲ್ಲಿ ಬರೋಬ್ಬರಿ 2ಕೋಟಿ 20ಲಕ್ಷ ರೂ. ಖರ್ಚು ಮಾಡಿ ಎರಡೂ ವಸತಿ ನಿಲಯದ ಕಟ್ಟಡಗಳು ನಿರ್ಮಾಣ ಮಾಡಿ  5 ವಷಗಳೇ ಕಳೆದಿದೆ. ಇನ್ನೂ ಉದ್ಘಾಟನೆಯಾಗಿಲ್ಲ ಬರೀ ಕುಡಿಯುವ ನೀರಿನ ನೆಪಮಾಡಿ 5 ವರ್ಷದಿಂದ ವಿದ್ಯಾರ್ಥಿಗಳ ಉಪಯೋಗಕ್ಕೆ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ ಅಧಿಕಾರಿಗಳು.

NO COMMENTS

LEAVE A REPLY