ಮಂಡ್ಯ ಜಿಲ್ಲೆಯಲ್ಲಿ ಸಜ್ಜಾಗಿ ಬರಿತ್ತಿದೆ ಕಾವೇರಿ ವನಿತಾ ಪಡೆ: ಬೀದಿ ಕಾಮಣ್ಣರು ಇನ್ಮುಂದೆ ಬಾಲ ಬಿಚ್ಚಂಗಿಲ್ಲ

ಮಂಡ್ಯ ಜಿಲ್ಲೆಯಲ್ಲಿ ಸಜ್ಜಾಗಿ ಬರಿತ್ತಿದೆ ಕಾವೇರಿ ವನಿತಾ ಪಡೆ: ಬೀದಿ ಕಾಮಣ್ಣರು ಇನ್ಮುಂದೆ ಬಾಲ ಬಿಚ್ಚಂಗಿಲ್ಲ

223
0
SHARE

ಮಂಡ್ಯ(ಅ,19,2017): ಮಂಡ್ಯ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳನ್ನು ಚುಡಾಯಿಸಿದ್ರೆ ಜೈಲೇ ಗತಿ. ಬೀದಿ ಕಾಮಣ್ಣರು ಇನ್ಮುಂದೆ ಬಾಲ ಬಿಚ್ಚಂಗಿಲ್ಲ. ಕಾಮುಕರಿಗೆ ಪಾಠ ಕಲಿಸಲು ಮಂಡ್ಯದಲ್ಲಿ ಸಜ್ಜಾಗಿ ಬರಿತ್ತಿದೆ ಕಾವೇರಿ ವನಿತಾ ಪಡೆ. ಜಿಲ್ಲಾ ಪೊಲೀಸ್ ಇಲಾಖೆ ಮಹಿಳಾ ಪೊಲೀಸರಿಗೆ ವಿಶೇಷ ತರಬೇತಿ ನೀಡುತ್ತಿದೆ. ಮುಂದಿನ ನವಂಬರ್ ತಿಂಗಳಿನಲ್ಲಿ ಈ ಪಡೆ ಕಾರ್ಯಾರಂಭ ಮಾಡಲಿದೆ. ಜಿಲ್ಲೆಯ ಎಲ್ಲಾ ಸ್ಥಳೀಯ ವ್ಯಾಪ್ತಿಯಲ್ಲಿ ಈ ಪಡೆ ಕಾರ್ಯ ನಿರ್ವಹಿಸಲಿದೆ.

ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಮೇಲಿನ ಹಲವು ಅಮಾನುಷ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಲು ಕಾವೇರಿ‌ ವನಿತಾ ಪಡೆ ಹುಟ್ಟು ಹಾಕಲಾಗಿದೆ. ಕಾವೇರಿ ವನಿತಾ ತಂಡ ಬಸ್ ಸ್ಟಾಂಡ್, ಕಾಲೇಜು ಆವರಣ, ಹಾಗೂ ಮಹಿಳೆಯರು ಹೆಚ್ಚು ಸಂಚರಿಸುವ ಜಾಗದಲ್ಲಿ ಕಾರ್ಯ ನಿರ್ವಹಿಸಲಿದೆ.

ಕಾವೇರಿ‌ ವನಿತಾ ಪಡೆಗೆ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಿನ ರೀತಿಯಲ್ಲಿ ಪ್ರತಿಕ್ರಿಯೆ ಸಿಕ್ಕಿದೆ. ಸಾರ್ವಜನಿಕರ ವಲಯದಲ್ಲಿ ಎಷ್ಟರ ಮಟ್ಟಿಗೆ ಭರವಸೆ ಉಳಿಸಿಕೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

NO COMMENTS

LEAVE A REPLY