ತಮಿಳಿಗರಿಂದ ಕನ್ನಡಿಗರ ಮೇಲೆ ಹಲ್ಲೆ ಆರೋಪದ ಕಾರಣ ಮೈಸೂರಿನಲ್ಲಿ ತಮಿಳು ಸಿನಿಮಾ ಪ್ರದರ್ಶನಕ್ಕೆ ತಡೆ

ತಮಿಳಿಗರಿಂದ ಕನ್ನಡಿಗರ ಮೇಲೆ ಹಲ್ಲೆ ಆರೋಪದ ಕಾರಣ ಮೈಸೂರಿನಲ್ಲಿ ತಮಿಳು ಸಿನಿಮಾ ಪ್ರದರ್ಶನಕ್ಕೆ ತಡೆ

245
0
SHARE

ಮೈಸೂರು(ಅ,18,2017):ಬೆಂಗಳೂರಿನಲ್ಲಿ ತಮಿಳಿಗರು ಕನ್ನಡಿಗರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮೈಸೂರಿನ ಕನ್ನಡ ಪರವೇದಿಕೆ ಕಾರ್ಯಕರ್ತರು ತಮಿಳು ಸಿನಿಮಾ ಪ್ರದರ್ಶನಕ್ಕೆ ತಡೆ ನೀಡಿದ ಘಟನೆ ಮೈಸೂರಿನಲ್ಲಿ ನಡೆಯಿತು.

ಬೆಂಗಳೂರಿನ ಸಂಪಿಗೆ ಚಿತ್ರ ಮಂದಿರದಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪ ಹಿನ್ನೆಲೆ ನಗರದ ಪ್ರಭಾ ಸಿನಿಮಾ ಚಿತ್ರಮಂದಿರದಲ್ಲಿ ಮೈಸೂರಿನ ಕನ್ನಡ ಪರವೇದಿಕೆ ಕಾರ್ಯಕರ್ತರು ಪ್ರದರ್ಶನಕ್ಕೆ ತಡೆ ನೀಡಿ ಪ್ರತಿಭಟನೆ ನಡೆಸಿದರು. ಕನ್ನಡಿಗರ ಮೇಲೆ ಹಲ್ಲೆ ನಡೆಸಿರುವವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.

ಹೀಗಾಗಿ ಕೊನೆಗೂ ತಮಿಳು‌ ನಟ ವಿಜಯ್ ಚಿತ್ರ ಪ್ರದರ್ಶನವನ್ನ ಥಿಯೇಟರ್ ಮಾಲೀಕ ಕುಂಜಪ್ಪ ಸ್ಥಗಿತಗೊಳಿಸಿದರು.

NO COMMENTS

LEAVE A REPLY