ಇಲ್ಲಿನ ಸರ್ಕಾರಿ ಆಸ್ಪೇತ್ರೆಯಲ್ಲಿ ವೈದ್ಯರು, ದಾದಿಯರಿಲ್ಲದೆ ಗಂಟೆಗಳ ಕಾಲ ನರಳಾಡಿದ ಗರ್ಭಿಣಿ

ಇಲ್ಲಿನ ಸರ್ಕಾರಿ ಆಸ್ಪೇತ್ರೆಯಲ್ಲಿ ವೈದ್ಯರು, ದಾದಿಯರಿಲ್ಲದೆ ಗಂಟೆಗಳ ಕಾಲ ನರಳಾಡಿದ ಗರ್ಭಿಣಿ

245
0
SHARE

ಮಂಡ್ಯ(ಅ,18,2017): ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು, ದಾದಿಯರಿಲ್ಲದೆ ಗರ್ಭಿಣಿ ಹೆಂಗಸು ಹೆರಿಗೆ ನೋವಿನಿಂದ ಒಂದು ಗಂಟೆಗಳ ಕಾಲ ನರಳಾಡಿದ ಘಟನೆ ಮಂಡ್ಯ ಜಿಲ್ಲೆಯ ಬೆಳಕವಾಡಿ ಗ್ರಾಮದಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ, ಮಳವಳ್ಳಿ ತಾಲೂಕಿನ, ಬೆಳಕವಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು‌. ಬೆಳಕವಾಡಿಯ ಚಿಕ್ಕಗಾಣಿಗರ ಬೀದಿಯ ಮಂಜು ಪತ್ನಿ ರತ್ನಳ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ಬಂದರೆ, ಅಲ್ಲಿ ವೈದ್ಯರು ಹಾಗೂ ದಾದಿಯರಿಲ್ಲದೆ ಆಸ್ಪತ್ರೆಯ ಮುಂಭಾಗದಲ್ಲಿ ಗರ್ಭಿಣಿ ಮಹಿಳೆ ಹೆರಿಗೆ ನೋವಿನಿಂದ ೧ ಗಂಟೆ ನರಳಾಡಿದೆ.

ಇನ್ನು ಆಸ್ಪತ್ರೆ ಸಿಬ್ಬಂದಿ ಬಳಿ ಆ್ಯಂಬುಲೆನ್ಸ್ ಕೇಳಿದ್ರೆ ಕೆಟ್ಟು ಹೋಗಿದೆ ಎಂದು ಬೆಜಾವಬ್ದಾರಿಯಿಂದ ಉತ್ತರ ನೀಡಿದ್ದಾರೆ. ಇದರಿಂದಾಗಿ ಗರ್ಭಿಣಿಯ ಕುಟುಂಬದವರು ಕಣ್ಣೀರು ಹಾಕುತ್ತ ಆಸ್ಪತ್ರೆ ಎದುರು ರೋಧಿಸಿದ ಘಟನೆ ನಡೆಯಿತು .

NO COMMENTS

LEAVE A REPLY