ಮೈಸೂರಿನಲ್ಲಿ ಪ್ರಯಾಣಿಕರ ಜತೆ ಅಸಭ್ಯ ವರ್ತನೆ: ವ್ಯಕ್ತಿಗೆ ಪೊಲೀಸರಿಂದ ಲಾಟಿ ಪ್ರಹಾರ

ಮೈಸೂರಿನಲ್ಲಿ ಪ್ರಯಾಣಿಕರ ಜತೆ ಅಸಭ್ಯ ವರ್ತನೆ: ವ್ಯಕ್ತಿಗೆ ಪೊಲೀಸರಿಂದ ಲಾಟಿ ಪ್ರಹಾರ

200
0
SHARE

ಮೈಸೂರು(ಅ,18,2017):  ನಗರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಜತೆ ಅಸಭ್ಯ ವರ್ತನೆ ತೋರುತ್ತಿದ್ದ ಅಪರಿಚಿತ ವ್ಯಕ್ತಿಯನ್ನ ಮೈಸೂರು ನಗರ ಪೊಲೀಸರು ಬಂಧಿಸಿದ್ದಾರೆ.

ಮೈಸೂರು ನಗರ ಬಸ್ ನಿಲ್ದಾಣದಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಜತೆ ಅಪರಿಚಿತ ವ್ಯಕ್ತಿ ವಿನಾ ಕಾರಣ ಅಸಭ್ಯವಾಗಿ ವರ್ತಿಸುವುದರ ಜತೆಗೆ ಜಗಳ ನಡೆಸುತ್ತಿದ್ದ ಎನ್ನಲಾಗುತ್ತಿದೆ. ಅಲ್ಲದೆ ಬಸ್ ಹತ್ತಿ ಪ್ರಯಾಣಿಕರಿಬ್ಬರ ಮೇಲೆ ಹಲ್ಲೆಗೂ ಮುಂದಾಗಿದ್ದ.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರ ಮೇಲೂ ಆತ ಮಾತಿನ ಚಕಮಕಿ ನಡೆಸಿ ಹಲ್ಲೆ ಮಾಡಲು ಮುಂದಾಗಿದ್ದ ಎನ್ನಲಾಗಿದೆ. ಕೂಡಲೇ ಪೊಲೀಸರು ಆತನಿಗೆ ಲಾಠಿಯಿಂದ ಹೊಡೆದು ಬಂಧಿಸಿ ಪೋಲಿಸ್ ಠಾಣೆಗೆ ಕರೆದೊಯ್ದಿದ್ದಾರೆ.

NO COMMENTS

LEAVE A REPLY