ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಸಂಪೂರ್ಣ ವರದಿ ನೀಡುವಂತೆ ಸಿಬಿಐನಿಂದ ಸಿಐಡಿಗೆ ಪತ್ರ

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಸಂಪೂರ್ಣ ವರದಿ ನೀಡುವಂತೆ ಸಿಬಿಐನಿಂದ ಸಿಐಡಿಗೆ ಪತ್ರ

180
0
SHARE

ಬೆಂಗಳೂರು(ಅ,18,2017): ಡಿವೈ ಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವರದಿ ನೀಡುವಂತೆ ಕೋರಿ ಸಿಬಿಐ ಸಿಐಡಿಗೆ ಪತ್ರ ಬರೆದಿದೆ.

ಸಿಐಡಿ ಡಿಜಿಪಿ ಕಿಶೋರ್ ಚಂದ್ರ ಅವರಿಗೆ ಪತ್ರ ಬರೆದಿರುವ ಸಿಬಿಐ ನಿರ್ದೇಶಕ, ಪ್ರಕರಣದ ಕಡತಗಳನ್ನ ಕ್ರೋಢೀಕರಿಸಿ ಸಂಪುರ್ಣ ವರದಿಯನ್ನ ನೀಡುವಂತೆ ಸೂಚಿಸಿದ್ದಾರೆ. ನಿನ್ನೆಯಷ್ಟೆ ಸಿಬಿಐ ಪತ್ರ ಸಿಐಡಿ ಡಿಜಿಪಿ ಕಿಶೋರ್ ಚಂದ್ರ ಅವರಿಗೆ ತಲುಪಿದೆ.

ಈ ವಿಷಯ ಕುರಿತು ಪ್ರತಿಕ್ರಿಯಿಸಿರುವ ಕಿಶೋರ್ ಚಂದ್ರ ಅವರು, ಒಂದು ವಾರದಲ್ಲಿ ಪ್ರಕರಣದ ಕಡತಗಳನ್ನ ಕ್ರೂಢೀಕರಿಸಿ ಚೆನ್ನೈನ ಸಿಬಿಐ ವಿಶೇಷ ವಿಭಾಗಕ್ಕೆ ವರದಿಯನ್ನ ಕಳುಹಿಸಿಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಸಿದ್ದು ಸಂಪೂರ್ಣ ಸಾಕ್ಷ್ಯಾಧಾರಗಳನ್ನ ಸಂಗ್ರಹಿಸಿತ್ತು.

NO COMMENTS

LEAVE A REPLY