ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಪೇಜಾವರ ಶ್ರೀಗಳ ವಿರೋಧ

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಪೇಜಾವರ ಶ್ರೀಗಳ ವಿರೋಧ

235
0
SHARE

ಉಡುಪಿ(ಅ,17,2017):   ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ವಿರೋಧ ವ್ಯಕ್ತಪಡಿಸಿರುವ ಪೇಜಾವರ ಶ್ರೀಗಳು, ಲಿಂಗಾಯತ ವೀರಶೈವರು ಹಿಂದುಗಳು ಒಂದಾಗಿರಬೇಕು, ಎಂದು ತಿಳಿಸಿದ್ದಾರೆ.

ಉಡುಪಿಯಲ್ಲಿ ಇಂದು ಪ್ರತ್ಯೇಕ ಲಿಂಗಾಯತ ಧರ್ಮ ಕುರಿತು  ಮಾತನಾಡಿದ ಪೇಜಾವರಶ್ರೀಗಳು, ಹೊರಗಿನವನಾಗಿ ಸಲಹೆ ನೀಡುತ್ತಿದ್ದೇನೆ. ನಮ್ಮನ್ನು ಬಿಟ್ಟು ಬೇರೆ ಹೋಗಬೇಡಿ, ನಾವೆಲ್ಲರು ಸಹೋದರರಂತೆ ಬಾಳೋಣ. ಲಿಂಗಾಯತರು ಹಿಂದೂಗಳಲ್ಲ ಎಂದರೆ, ಇನ್ಯಾರು ಹಿಂದೂಗಳು…? ಎಂದು ಪ್ರಶ್ನಿಸಿದರು.

ಎಲ್ಲರು ಒಂದಾಗಿದ್ದರೆ ಲಿಂಗಾಯತ ಸಮಾಜಕ್ಕೆ ಬಲ. ಬ್ರಾಹ್ಮಣರಿಂದ, ಮಾಧ್ವರಿಂದ ಬಸವಣ್ಣಗೆ ಅನ್ಯಾಯ ಆಗಿಲ್ಲ. ಇದೊಂದು ಪ್ರೇಮದ ಸಲಹೆ, ನಮ್ಮನ್ನು ಬಿಟ್ಟು ಹೋಗಬೇಡಿ.ಎಲ್ಲರೂ ಸಹೋದರರಂತೆ ಬಾಳೋಣ ಎಂದು ಪೇಜಾವರ ಶ್ರೀಗಳು ಮನವಿ ಮಾಡಿದರು.

NO COMMENTS

LEAVE A REPLY