ಸೆಲ್ಫಿ ತೆಗೆಯಲು ಹೋಗಿ ಬಂಡೆಯಿಂದ ಜಾರಿಬಿದ್ದು ವಿದ್ಯಾರ್ಥಿ ಸಾವು

ಸೆಲ್ಫಿ ತೆಗೆಯಲು ಹೋಗಿ ಬಂಡೆಯಿಂದ ಜಾರಿಬಿದ್ದು ವಿದ್ಯಾರ್ಥಿ ಸಾವು

186
0
SHARE

ಬೆಂಗಳೂರು(ಅ,17,2017): ಸೆಲ್ಫಿ ತೆಗೆದುಕೊಳ್ಳಲು ಹೋಗಿ ವಿದ್ಯಾರ್ಥಿಯೊಬ್ಬ  ಪಾಚಿಕಟ್ಟಿದ್ದ ಜಲಪಾತ ಬಂಡೆಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗರೆ ಹೋಬಳಿಯ ಚಿಕ್ಕರಾಯಪ್ಪನಹಳ್ಳಿ ಚೆನ್ನಗಿರಿ ಜಲಪಾತದ ಬಳಿ ಈ ಘಟನೆ ನಡೆದಿದೆ. ದೊಡ್ಡಬಳ್ಳಾಪುರದ ಸರ್ಕಾರಿ ಕಾಲೇಜಿನಲ್ಲಿ ಅಂತಿಮ ಬಿಕಾಂ ವ್ಯಾಸಾಂಗ ಮಾಡುತ್ತಿದ್ದ ನವೀನ್(23) ಮೃತಪಟ್ಟ ವಿದ್ಯಾರ್ಥಿ. ಈತ ತನ್ನ ಸ್ನೇಹಿತರ  ಜತೆ  ಜಲಪಾತ ವೀಕ್ಷಿಸಲು ತೆರಳಿದ್ದ. ಈ ವೇಳೆ ಬಂಡೆ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ.

ಈ ವೇಳೆ ಬಂಡೆ ಪಾಚಿಕಟ್ಟಿಕೊಂಡಿದ್ದ ಪರಿಣಾಮ ನವೀನ್ ಜಾರಿ ಬಂಡೆ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ. ಈ ಕುರಿತು ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

NO COMMENTS

LEAVE A REPLY