ಕನ್ನಡ ನಾಡಲ್ಲಿ ಪರಭಾಷಿಕರು ಕನ್ನಡ ಮಾತನಾಡಲೇಬೇಕು: ಸಿಎಂ ಸಿದ್ದರಾಮಯ್ಯ

ಕನ್ನಡ ನಾಡಲ್ಲಿ ಪರಭಾಷಿಕರು ಕನ್ನಡ ಮಾತನಾಡಲೇಬೇಕು: ಸಿಎಂ ಸಿದ್ದರಾಮಯ್ಯ

73
0
SHARE

ಬೆಂಗಳೂರು(ಅ.15.2017): ಮಾತೃಭಾಷೆ ಯಾವುದೇ ಇದ್ದರೂ ಅದು ಮನೆಯಲ್ಲಿ ಮಾತ್ರ. ಕನ್ನಡ ನಾಡಿನಲ್ಲಿ ನೆಲೆಸಿರುವ ಪರಭಾಷಿಕರು ಕನ್ನಡದಲ್ಲೇ ಮಾತನಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಆಗಿ ಹೇಳಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ‘ಕನ್ನಡಿಗರ ಸಮಾವೇಶ-ಜಾನಪದ ಸಂಭ್ರಮ’ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯನವರು ಕನ್ನಡ ನಾಡಲ್ಲಿ ನೆಲೆಸಿರುವ ಪರಭಾಷಿಕರಿಗಿಂತ ಕನ್ನಡಿಗನೇ ಸಾರ್ವಭೌಮ. ಮಾತೃಭಾಷೆ ಯಾವುದೇ ಇದ್ದರೂ ಕರ್ನಾಟಕದ ಮಣ್ಣಲ್ಲಿ ನೆಲೆಸಿರುವ ಅನ್ಯಭಾಷಿಕರು ಕನ್ನಡಿಗರಾಗಲೇಬೇಕು. ಇದರಲ್ಲಿ ರಾಜಿಯಾಗುವ ಮಾತಿಲ್ಲ. ಸರ್ಕಾರ ಕನ್ನಡದ ನೆಲ, ಜಲ, ಭಾಷೆ ಮತ್ತು ಕನ್ನಡಿಗರ ರಕ್ಷಣೆಗೆ ಬದ್ಧ ಎಂದು ಆಶ್ವಾಸನೆ ನೀಡಿದರು.
ಕನ್ನಡ ನಾಡು-ನುಡಿ, ಜಲ, ಭಾಷೆಯ ವಿಷಯದಲ್ಲಿ ನಿರಂತರವಾಗಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ಮತ್ತು ಅವರ ತಂಡ ಹೋರಾಟ ನಡೆಸುತ್ತಿದೆ. ತಮಿಳುನಾಡಿನಲ್ಲಿ ತಮಿಳು, ಕೇರಳದಲ್ಲಿ ಮಲೆಯಾಳಂ, ಆಂಧ್ರಪ್ರದೇಶದಲ್ಲಿ ತೆಲುಗಿಗೆ ಲಭ್ಯವಾಗಿರುವ ಪ್ರಾಧಾನ್ಯತೆ ಕರ್ನಾಟಕದಲ್ಲಿ ಕನ್ನಡಕ್ಕೆ ಸಿಗಬೇಕು. ಕನ್ನಡಿಗರಲ್ಲಿ ಭಾಷಾಭಿಮಾನ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುತ್ತಿರುವ ನಾರಾಯಣಗೌಡ ಹಾಗೂ ಅವರ ತಂಡದ ಶ್ರಮ ಅಪಾರವಾದದು. ಕನ್ನಡ ನಾಡು-ನುಡಿ ಪರ ಹೋರಾಟ ನಡೆಸುತ್ತಿರುವ ಹೋರಾಟಗಾರರ ಮೇಲೆ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ವಾಪಸ್ ಪಡೆಯಲಾಗುವುದು ಎಂದು ಭರವಸೆ ನೀಡಿದರು.

NO COMMENTS

LEAVE A REPLY