ಬಿಬಿಎಂಪಿ ಹಣವನ್ನ ಸಿಎಂ ಲೂಟಿ ಹೊಡೆದಿದ್ದಾರೆ: ಬಿಎಸ್ ಯಡಿಯೂರಪ್ಪ ಆರೋಪ

ಬಿಬಿಎಂಪಿ ಹಣವನ್ನ ಸಿಎಂ ಲೂಟಿ ಹೊಡೆದಿದ್ದಾರೆ: ಬಿಎಸ್ ಯಡಿಯೂರಪ್ಪ ಆರೋಪ

254
0
SHARE

ಬೆಂಗಳೂರು(ಅ,14,2017):ಬಿಬಿಎಂಪಿ ಹಣವನ್ನ ಸಿಎಂ ಸಿದ್ದರಾಮಯ್ಯ ಲೂಟಿ ಹೊಡೆದಿದ್ದಾರೆ. ಈ ಕುರಿತು ದಾಖಲೆಗಳನ್ನ ಬಿಡುಗಡೆ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ನಿನ್ನೆ ರಾಜ್ಯದಲ್ಲಿ ಸುರಿದ ಭಾರಿ ಮಳೆಗೆ  ಮೃತಪಟ್ಟವರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಬಳಿಕ ಮಾತನಾಡಿದ ಬಿ.ಎಸ್ ಯಡಿಯೂರಪ್ಪ, ನಿದ್ದೆಯಲ್ಲಿದ್ದ ಸಿದ್ದರಾಮಯ್ಯನವರ ಕಣ್ಣು ತೆರೆಸಿದ್ದೇವೆ. ಬಿಬಿಎಂಪಿ ಸತ್ತು ಹೋಗಿದೆ. ಪಾಲಿಕೆ ಹಣವನ್ನ ಸಿಎಂ ಸಿದ್ದರಾಮಯ್ಯ ಲೂಟಿ ಹೊಡೆದಿದ್ದು, ಈ ಕುರಿತು ಮೂರು ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.

ಮಳೆಯಿಂದ ಸಂಕಷ್ಠಕ್ಕೀಡಾಗಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೆಲವರಿಗೆ ಪರಿಹಾರ ನೀಡಿದ್ದೇವೆ. ಇದನ್ನ ಸಿಎಂ ಸಿದ್ದರಾಮಯ್ಯ ರಾಜಕೀಯ ಅಂತಾರೇ.ಇದರಲ್ಲಿ ಯಾವುದೇ ರೀತಿಯ ರಾಜಕೀಯ ಇಲ್ಲ ಎಂದಿದ್ದಾರೆ

NO COMMENTS

LEAVE A REPLY