ಮೋದಿ ಬಗ್ಗೆ ಅವಾಚ್ಯ ಶಬ್ದ ಬಳಕೆ: ಮೈಸೂರಿನಲ್ಲಿ ಪ್ರತಿಭಟನೆ,ರೋಷನ್ ಬೇಗ್ ವಿರುದ್ಧ ದೂರು ದಾಖಲು

ಮೋದಿ ಬಗ್ಗೆ ಅವಾಚ್ಯ ಶಬ್ದ ಬಳಕೆ: ಮೈಸೂರಿನಲ್ಲಿ ಪ್ರತಿಭಟನೆ,ರೋಷನ್ ಬೇಗ್ ವಿರುದ್ಧ ದೂರು ದಾಖಲು

262
0
SHARE

ಮೋದಿ ಬಗ್ಗೆ ಅವಾಚ್ಯ ಶಬ್ದ ಬಳಕೆ: ಮೈಸೂರಿನಲ್ಲಿ ಪ್ರತಿಭಟನೆ,ರೋಷನ್ ಬೇಗ್ ವಿರುದ್ಧ ದೂರು ದಾಖಲು

ಮೈಸೂರು(ಅ,14,2017): ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ  ಬಿಎಸ್ ಯಡಿಯೂರಪ್ಪ ಬಗ್ಗೆ ಅವಾಚ್ಯ ಶಬ್ದ ಬಳಕೆ ಮಾಡಿದ  ಸಚಿವ ರೋಷನ್ ಬೇಗ್ ವಿರುದ್ದ ಮೈಸೂರು ‌ಬಿಜೆಪಿ ಯುವ ಮೋರ್ಚಾ  ಪ್ರತಿಭಟನೆ ನಡೆಸಿತು.

ಮೈಸೂರು  ಗಾಂಧಿ ಪ್ರತಿಮೆ ವೃತ್ತದ ಬಳಿ  ಬಿಜೆಪಿ ಕಾರ್ಯಕರ್ತರು, ರೋಷನ್ ಎಂಬ ಕತ್ತೆಗೇನು ಗೊತ್ತು ಕಸ್ತೂರಿಯ ಬೆಲೆ ಎಂದು ಕತ್ತೆಯ ಕತ್ತಿಗೆ ನಾಮಫಲಕ ಹಾಕಿ ವಿನೂತನ ಪ್ರತಿಭಟನೆ ನಡೆಸಿದರು. ಅಲ್ಲದೆ ರೋಷನ್ ಬೇಗ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು. ಕೂಡಲೇ ರೋಷನ್ ಬೇಗ್ ಕ್ಷಮೆ ಯಾಚಿಸಬೇಕು, ಹಾಗೂ ಸಚಿವ ಸಂಪುಂಟದಿಂದ ಕೈ ಬಿಡುವಂತೆ ಒತ್ತಾಯ ಮಾಡಿದರು.

ಸಾರ್ವಜನಿಕ ಸಮಾರಂಭ ವೊಂದರಲ್ಲಿ, ಭಾರತ ದೇಶದ ಮಾನ್ಯ ಪ್ರಧಾನಮಂತ್ರಿ ನರೇಂದ್ರಮೋದಿ ಯವರ ಬಗ್ಗೆ ಅಶ್ಲೀಲ ಪದಗಳನ್ನು ಬಳಸಿದ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ರೋಷನ್ ಬೇಗ್ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿ ಕೊಂಡು, ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದು ಕೊಳ್ಳಬೇಕೆಂದು ಬನಶಂಕರಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

NO COMMENTS

LEAVE A REPLY