ಕೆಎಸ್ ಓಯು ಮುಚ್ಚುವ ಕಠಿಣ ನಿರ್ಧಾರವಿಲ್ಲ:ಪ್ರಕಾಶ್ ಜಾವ್ಡೇಕರ್

ಕೆಎಸ್ ಓಯು ಮುಚ್ಚುವ ಕಠಿಣ ನಿರ್ಧಾರವಿಲ್ಲ:ಪ್ರಕಾಶ್ ಜಾವ್ಡೇಕರ್

242
0
SHARE

ಕೆಎಸ್ ಓಯು ಮುಚ್ಚುವ ಕಠಿಣ ನಿರ್ಧಾರವಿಲ್ಲ:ಪ್ರಕಾಶ್ ಜಾವ್ಡೇಕರ್

ಬೆಂಗಳೂರು(ಅ,13,2017):  ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವನ್ನು ಮುಚ್ಚುವಂತಹ ಕಠಿಣ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಹೇಳಿಕೆ ನೀಡಿದ್ದಾರೆ.

ಕೆಎಸ್ ಓಯು ಮುಚ್ಚಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡ ಹಿನ್ನಲೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮುಚ್ಚದಂತೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಿ ಕೆಎಸ್ಒಯು ವಿದ್ಯಾರ್ಥಿಗಳು ಹಾಗೂ ಪ್ರಧ್ಯಾಪಕರು ಬಿಜೆಪಿ ನಾಯಕರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿ ಬಳಿಕ ಮಾತನಾಡಿದ ಸಚಿವ ಪ್ರಕಾಶ್ ಜಾವಡೇಕರ್,  ಮುಕ್ತ ವಿವಿ ಸಮಸ್ಯೆಗಳಲ್ಲಿ ಮೂರ್ನಾಲ್ಕು ಆಯಾಮಗಳಿವೆ. ಆದರಲ್ಲಿ ಪ್ರಮುಖವಾಗಿ ಮುಕ್ತ ವಿವಿಯಲ್ಲಿನ ಅಕ್ರಮ ಪ್ರಮುಖವಾಗಿದೆ. ಈ ಬಗ್ಗೆ ಯುಜಿಸಿ ಕೂಡ ತನಿಖೆ ನಡೆಸಿದೆ. ಹಾಗಾಗಿ ಕೆಲವು ಸಮಸ್ಯೆಗಳಿಗಾಗಿ ಅರ್ಹ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು. ಅದಕ್ಕಾಗಿ ಇದೇ 17ರಂದು ಯುಜಿಸಿ, ರಾಜ್ಯ ಸರ್ಕಾರ ಜತೆ ಸಭೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.

NO COMMENTS

LEAVE A REPLY