ಸಭೆಯಲ್ಲಿ ಪ್ರಧಾನಿ ಮೋದಿ ಹಾಗೂ ಬಿ ಎಸ್ ವೈ ರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ರೋಷನ್...

ಸಭೆಯಲ್ಲಿ ಪ್ರಧಾನಿ ಮೋದಿ ಹಾಗೂ ಬಿ ಎಸ್ ವೈ ರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ರೋಷನ್ ಬೇಗ್

262
0
SHARE

ಬೆಂಗಳೂರು(ಅ.13,2017):ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಬಗ್ಗೆ ನಗರಾಭಿವೃದ್ಧಿ ಹಾಗೂ ಹಜ್ ಸಚಿವ ರೋಷನ್ ಬೇಗ್ ಅವಾಚ್ಯ ಶಬ್ದಗಳನ್ನ  ಬಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕಳೆದ ಮೂರು ದಿನಗಳ ಹಿಂದೆ ಪುಲಕೇಶಿ ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸಚಿವ ರೋಷನ್ ಬೇಗ್ ಬಿಜೆಪಿಯನ್ನ ಟೀಕಿಸುವ ಬರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಎಸ್ ಯಡಿಯೂರಪ್ಪ ಬಗ್ಗೆ ಅವಾಚ್ಯ ಶಬ್ದಗಳನ್ನ ಬಳಸಿ ಮಾತನಾಡಿದ್ದಾರೆ.

ಅಧಿಕಾರಕ್ಕೆ ಬಂದ ಬಳಿಕ ಎಲ್ಲರೂ ‘ನಮ್ಮ ಮೋದಿ’ ಅಂತ ಹೊಗಳುತ್ತಿದ್ದರ ಜನರು.“ನೋಟ್ ಬ್ಯಾನ್ ಮಾಡಿದ ಮೇಲೆ ಏನಾಯ್ತು? ………ಏನೆಲ್ಲಾ ಮಾಡಿಬಿಟ್ಟ’ ಎಂದು ಬೈಯುತ್ತಿದ್ದಾರೆ” ಎಂದು ರೋಷನ್ ಬೇಗ್ ಅವಾಚ್ಯ ಶಬ್ದವನ್ನು ಬಳಸಿ ನಿಂದಿಸಿದ್ದಾರೆ. ಈ ಮಾತಿಗೆ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಚಪ್ಪಾಳೆ,ಶಿಳ್ಳೆ ಹಾಕಿದರು.

ಅಲ್ಲದೆ ಕಾಂಗ್ರೆಸ್ ಪಕ್ಷ ಇಡೀ ಭಾರತ ದೇಶವನ್ನು ಅಭಿವೃದ್ಧಿಪಡಿಸಿತ್ತು. ಇಂದಿರಾಗಾಂಧಿ ತಮ್ಮ ಬದುಕನ್ನೇ ದೇಶಕ್ಕಾಗಿ ಮುಡಿಪಾಗಿಟ್ಟರು. ರಾಜೀವ್ ಗಾಂಧಿ ಕೂಡ ತಮ್ಮ ಜೀವನ ತ್ಯಾಗ ಮಾಡಿದರು. ಅಲ್ಲದೆ ರಾಜ್ಯದಲ್ಲಿ ಅನ್ನಭಾಗ್ಯ, ಕ್ಷೀರ ಭಾಗ್ಯ ಯೋಜನೆ, ಗರ್ಭಿಣಿಯರಿಗೆ ಬಿಸಿಯೂಟ ನೀಡುವ ಯೋಜನೆಯನ್ನ ಸಿಎಂ  ಸಿದ್ದರಾಮಯ್ಯ ಕೊಟ್ಟಿದ್ದಾರೆ. ಆದ್ರೆ ಮೋದಿ ಇಂತಹ ಜನಪರ ಯೋಜನೆ ಮಾಡೋದು ಬಿಟ್ಟು, ಸುಮ್ಮನೆ ಮೈಕ್​ ಹಿಡ್ಕೊಂದು “ಮನ್​ ಕಿ ಬಾತ್ ಹೇಳ್ತಿನಿ ಕೇಳಿ” ಎಂದು ವ್ಯಂಗ್ಯವಾಡಿದ್ದಾರೆ.

ಹಾಗೂ ಬಿಜೆಪಿ ರಾಜ್ಯದ್ಯಕ್ಷರಾದ ಬಿ. ಎಸ್ ಯಡಿಯೂರಪ್ಪ ವಿರುದ್ದ ಕೂಡ ವಾಗ್ದಾಳಿ ನಡೆಸಿದ್ದು. ನಾವು 5 ರೂಪಾಯಿಗೆ ಬ್ರೇಕ್​ ಫಾಸ್ಟ್, 10 ರೂಪಾಯಿಗೆ ಊಟ ಕೊಡ್ತೀದ್ದೀವಿ. ಯಡಿಯೂರಪ್ಪ ಸಿಎಂ ಆಗಿದ್ದಾಗ ಜನರಿಗೆ ಇದೆನ್ನೆಲ್ಲ ಯಾಕೆ ಕೊಡಲಿಲ್ಲ? ಯಡಿಯೂರಪ್ಪ ಬರೀ ಶೋಭಾ ಕರಂದ್ಲಾಜೆ ನೋಡ್ಕೊಂಡು ನಿಂತಿದ್ದರು ಎಂದು ಹೇಳುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.

ಸಚಿವ ರೋಷನ್ ಬೇಗ್ ಹೇಳಿಕೆಯನ್ನು ಬಲವಾಗಿ ಖಂಡಿಸಿ ರಾಜೀನಾಮೆ ನೀಡುವಂತೆ ಬಿಜೆಪಿ ಮುಖಂಡರಾದ ಗೋಮಧುಸೂದನ್,  ಅಶ್ವಥ್ ನಾರಾಯಣ್  ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.

NO COMMENTS

LEAVE A REPLY