ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್: ಶೀಘ್ರವೇ ಆದೇಶ..?

ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್: ಶೀಘ್ರವೇ ಆದೇಶ..?

64
0
SHARE

ಬೆಂಗಳೂರು(ಅ,13 2017): ಕೇಂದ್ರ ಸರ್ಕಾರದ 2001ರ ಸೆಂಟ್ರಲ್ ಮೋಟರ್ ವೆಹಿಕಲ್ ಆ್ಯಕ್ಟ್ ಅನ್ವಯ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಸಬೇಕೆಂಬ ನಿಯಮವನ್ನು ರಾಜ್ಯದಲ್ಲಿ ಶೀಘ್ರ ಜಾರಿಗೊಳಿಸಲು ಕರ್ಣಾಟಕ ರಾಜ್ಯ ಸರ್ಕಾರ ಬೃಹತ್ ಚಿಂತನೆ ನಡೆಸಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಾರಿಗೆ ಸಚಿವ ಎಚ್.ಎಂ. ರೇವಣ್ಣ ರವರು, ವಾಹನಗಳ ಮೇಲೆ ಸೂಕ್ತ ನಿಗಾ ಇಡಲು ಹೊಸ ನಂಬರ್ ಪ್ಲೇಟ್ ಅಳವಡಿಕೆಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಈ ಬಗೆಯಾಗಿ ಒಂದು ವಾರದೊಳಗೆ ಎಲ್ಲ ಬಗೆಯ ವಾಹನಗಳಿಗೆ ಹೊಸ ನಂಬರ್ ಪ್ಲೇಟ್ ಅಳವಡಿಸುವ ಕುರಿತಂತೆ ಆದೇಶ ಹೊರಬೀಳುವ ನಿರೀಕ್ಷೆ ಇದೆ.

2009ರಲ್ಲೇ ಈ ಕಾಯ್ದೆ ಜಾರಿಗೆ ಬಂದಿದ್ದರೂ ರಾಜ್ಯದಲ್ಲಿ ಈ ನಿಯಮವನ್ನು ಅಷ್ಟೊಂದು ಗಂಭೀರವಾಗಿ ಅನುಷ್ಠಾನಗೊಳಿಸಿರಲಿಲ್ಲ. ಹೊಸ ಮಾದರಿಯ ನಂಬರ್ ಪ್ಲೇಟ್ ದುಬಾರಿಯಾಗಿದ್ದು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

NO COMMENTS

LEAVE A REPLY