ಕನ್ನಡ ರಾಜ್ಯೋತ್ಸವ ಹೊಸ್ತಿಲಲ್ಲೇ ಕನ್ನಡಕ್ಕೆ ನಾಡದ್ರೋಹ

ಕನ್ನಡ ರಾಜ್ಯೋತ್ಸವ ಹೊಸ್ತಿಲಲ್ಲೇ ಕನ್ನಡಕ್ಕೆ ನಾಡದ್ರೋಹ

173
0
SHARE

ಬೆಳಗಾವಿ(ಅ.12): ಕನ್ನಡ ರಾಜ್ಯೋತ್ಸವ ಹೊಸ್ತಿಲಲ್ಲಿ ಇರುವಾಗಲೇ ರಾಜ್ಯ ಸರ್ಕಾರ ನಾಡದ್ರೋಹಿಗಳಿಗೆ ಮಣೆ ಹಾಕುತ್ತಿದೆಯಾ ಎಂಬ ಅನುಮಾನ ಎದುರಾಗಿದೆ. ಕರ್ನಾಟಕ ಸರ್ಕಾರದ ಶವಯಾತ್ರೆ ಮಾಡುವುದಾಗಿ ಉದ್ಧಟತನ ಪ್ರದರ್ಶಿಸಿದ್ದ ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ಅವರಿಗೆ 10 ಕೋಟಿ ರೂಪಾಯಿಯನ್ನು ಮುಖ್ಯಮಂತ್ರಿಯಿಂದ ಅನುದಾನ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಸಿಎಂ ಸಿದ್ದರಾಮಯ್ಯ ಇತ್ತೀಚಿಗಷ್ಟೇ ಬೆಳಗಾವಿ ಜಿಲ್ಲೆಗೆ 15 ಕೋಟಿ ರೂ. ಅನುದಾನ ನೀಡಿದ್ದು, ಇದರಲ್ಲಿ ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಮತಕ್ಷೇತ್ರಕ್ಕೆ 5 ಕೋಟಿ, ಎಂಇಎಸ್‌ ಶಾಸಕ ಸಂಭಾಜಿ ಪಾಟೀಲ ಕ್ಷೇತ್ರಕ್ಕೆ 10 ಕೋಟಿ ರೂ. ನೀಡಿದ್ದಾರೆ ಎನ್ನುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಚುನಾವಣೆಗೆ ಆರು ತಿಂಗಳಿರಬೇಕಾದರೆ 10 ಕೋಟಿ ರೂ. ಅನುದಾನ ನೀಡಿರುವುದು ರಾಜಕೀಯ ಗಿಮಿಕ್ ಎಂದು ಬಿಜೆಪಿ ಮಾಜಿ ಶಾಸಕ ಅಭಯ ಪಾಟೀಲ್‌ ಟೀಕಿಸಿದ್ದಾರೆ.
ಈಗಾಗಲೇ ಶಾಸಕ ಸಂಭಾಜಿ ಪಾಟೀಲ ಕಳೆದ ಲೋಕಸಭೆ ಚುನಾವಣೆಯಲ್ಲಿ ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದರು. ಮುಂಬರುವ 2018ರ ಚುನಾವಣೆಯಲ್ಲಿ ಸಂಭಾಜಿ ಪಾಟೀಲ್‌ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವ ಪ್ರಯತ್ನ ಪಕ್ಷದಿಂದ ನಡೆಯುತ್ತಿದೆಯೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

NO COMMENTS

LEAVE A REPLY