ಪಿರಿಯಪಟ್ಟಣ: ಕಂದಕದಲ್ಲಿ ಸಿಲುಕಿ ಸಂಕಷ್ಟದಲ್ಲಿದ್ದ ಕಾಡಾನೆ ರಕ್ಷಣೆ.

ಪಿರಿಯಪಟ್ಟಣ: ಕಂದಕದಲ್ಲಿ ಸಿಲುಕಿ ಸಂಕಷ್ಟದಲ್ಲಿದ್ದ ಕಾಡಾನೆ ರಕ್ಷಣೆ.

224
0
SHARE

ಪಿರಿಯಪಟ್ಟಣ: ಕಂದಕದಲ್ಲಿ ಸಿಲುಕಿ ಸಂಕಷ್ಟದಲ್ಲಿದ್ದ ಕಾಡಾನೆ ರಕ್ಷಣೆ.

ಪಿರಿಯಾಪಟ್ಟಣ: ಕಾಲು ನೋವಿನಿಂದ ಬಳಲುತ್ತೀದ್ದ ಕಾಡಾನೆಯೊಂದು ಆನೆಚೌಕೂರು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಕಂದಕಕ್ಕೆ ಬಿದ್ದು ತೀವ್ರ ಅಸ್ವಸ್ಥಗೊಂಡು ಹೋರಾಡುತ್ತಿದ್ದ ಒಂಟಿ ಸಲಗವನ್ನು ಅರಣ್ಯ ಇಲಾಖೆಯ ತಂಡ ಗುರುವಾರ ಕಾರ್ಯಾಚರಣೆ ನಡೆಸಿ ರಕ್ಷಿಸಿ, ಚಿಕಿತ್ಸೆ ನೀಡುತ್ತಿದೆ.

ತಾಲ್ಲೂಕಿನ ಕೋಗಿಲವಾಡಿ ಸಮೀಪದ ಸಿಪಿಟಿ 7 ಅರಣ್ಯ ಪ್ರದೇಶದ ಅಂಚಿನಲ್ಲಿರುವ ಆನೆಕಂದಕದಲ್ಲಿ ಆನೆ ಸಿಲುಕಿರುವ ಕುರಿತು ಮಾಹಿತಿ ಪಡೆದ ಅಧಿಕಾರಿಗಳ ನೇತೃತ್ವದ ತಂಡ ಸ್ಥಳಕ್ಕೆ ಬಂದು ಮೇಲೆತ್ತಲು ಯತ್ನಿಸಿತು. ಆದರೆ, ಮುಂದಿನ ಎಡಗಾಲು ಗಾಯಗೊಂಡಿದ್ದು, ಕೆಸರಿನಲ್ಲಿ ಹೂತುಕೊಂಡಿದ್ದರಿಂದ ಆನೆಯನ್ನು ಮೇಲೆತ್ತಲು ಸಾಧ್ಯವಾದೆ,ಮತ್ತಿಗೋಡು ಆನೆ ಶಿಬಿರದಿಂದ ದಸರಾ ಆನೆಗಳಾದ ಅಭಿಮನ್ಯು ಮತ್ತು ಕೃಷ್ಣ ಆನೆಗಳ ನೆರವಿನಿಂದ ಆನೆಯನ್ನು ಮೇಲೆಳೆಯಲಾಯಿತು.

ಆನೆಯು ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಅದಕ್ಕೆ ಎರಡೂ ಕಣ್ಣುಗಳು ಕಾಣಿಸುವುದಿಲ್ಲ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ಎಸಿಎಫ್ ಸೋಮಪ್ಪ ತಿಳಿಸಿದರು.

ವನ್ಯಜೀವಿ ವೈದ್ಯಧಿಕಾರಿ ಡಾ.ಮುಜೀಬ್‌ ಮಾತನಾಡಿ, ಆನೆಗೆ 25 ವರ್ಷ ವಾಗಿದ್ದು ಆನೆಯೊಂದಿಗೆ ನಡೆದ ಕಾದಾಟದಲ್ಲಿ ತಿಂಗಳ ಹಿಂದೆ ಕಾಲಿಗೆ ಗಾಯವಾಗಿರುವುದರಿಂದ ಕಂದಕಕ್ಕೆ ಸಿಲುಕಿದೆ. ಬುಧವಾರವೂ ಅದಕ್ಕೆ ಚಿಕಿತ್ಸೆ ನೀಡಲು ಹುಡುಕಲಾಯಿತು. ಅದು ಕಾಣಿಸದ ಕಾರಣ ವಾಪಸಾಗಿದ್ದೆವು. ಆನೆಯ ಒಂದು ದಂತವೂ ಮುರಿದು ಹೋಗಿದ್ದು, ಚಿಕಿತ್ಸೆಯನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು.

NO COMMENTS

LEAVE A REPLY