ಗೌರಿ ಲಂಕೇಶ್ ಹತ್ಯೆ ಪ್ರಕರಣ ತನಿಕೆ ಹಿತದೃಷ್ಟಿಯಿಂದ ಏನು ಹೇಳಲು ಸಾದ್ಯವಿಲ್ಲ ಎಂದು ಗೃಹ ಸಚಿವ...

ಗೌರಿ ಲಂಕೇಶ್ ಹತ್ಯೆ ಪ್ರಕರಣ ತನಿಕೆ ಹಿತದೃಷ್ಟಿಯಿಂದ ಏನು ಹೇಳಲು ಸಾದ್ಯವಿಲ್ಲ ಎಂದು ಗೃಹ ಸಚಿವ ರಾಮಲಿಂಗರೆಡ್ಡಿ ಹೇಳಿಕೆ

205
0
SHARE

ಮೈಸೂರು(ಅ,12,2017): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಪ್ರಕರಣದ ಹಿತದೃಷ್ಟಿಯಿಂದ ಯಾರಲ್ಲೂ ಏನು ಹೇಳಲು ಸಾದ್ಯವಿಲ್ಲ ಎಂದು ಗೃಹ ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.

ಮೈಸೂರಿನಲ್ಲಿ ಮಾತನಾಡಿದ ಸಚಿವ ರಾಮಲಿಂಗರೆಡ್ಡಿ,  ಪ್ರಕರಣದ ತನಿಖೆಯ ಜವಾಬ್ದಾರಿಯನ್ನ ಎಸ್. ಐ. ಟಿಗೆ ವಹಿಸಲಾಗಿದೆ ಹಾಗೂ ಈಗಾಗಲೇ ಎಸ್.ಐ.ಟಿ. ತನಿಖೆ ನಡೆಸುತ್ತಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸೂಕ್ತ ಸುಳಿವು ಇದೆ. ಇಂತಾ ಪ್ರಕರಣದಲ್ಲಿ ಅಷ್ಟು ಸುಲಭವಾಗಿ ಕಾಲಮಿತಿ ವಿಧಿಸುವುದು ಅಸಾಧ್ಯವಾದದು. ಈ ಪ್ರಕರಣದ ಕುರಿತು ಮಾಹಿತಿಯನ್ನು ಸಾರ್ವಜನಿಕವಾಗಿ ಹೇಳುವಂತಿಲ್ಲ ಎಂದರು.

ಗೃಹ ಇಲಾಖೆಗೆ ಕೆಂಪಯ್ಯ ಹಸ್ತಕ್ಷೇಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ  ನೀಡಿದ ಸಚಿವ ರಾಮಲಿಂಗಾರೆಡ್ಡಿ, ಗೃಹ ಸಲಹೆಗಾರ ಕೆಂಪಯ್ಯರ  ಹಸ್ತಕ್ಷೇಪ ಎಂಬುದಿಲ್ಲ. ನಾನು ಬಂದ ಮೇಲೆ ಆ ರೀತಿ ಯಾವುದೂ ಆಗಿಲ್ಲ. ಅಗತ್ಯ ಬಿದ್ದಾಗ ನಾನು ಖಂಡಿತವಾಗಿಯೂ ಎಲ್ಲರಿಂದಲೂ ಸಲಹೆ ಪಡೆಯುತ್ತೇನೆ. ಮಾದ್ಯಮಗಳಲ್ಲಿ t ಒಂದು ಗಂಟೆಗಳ ಚರ್ಚೆ ಮೂಲಕ ನಮಗೆ ಸಲಹೆ ಕೊಡುತ್ತೀರಿ. ನಾವು ಆ ಸಲಹೆಗಳನ್ನೂ ಗಮನಿಸುತ್ತೇವೆ ಎಂದು ತಿಳಿಸಿದರು.

ರಾಜೇಂದ್ರ ಕಠಾರಿಯಾಗೆ ಸಚಿವರಿಂದ ಒತ್ತಡ ವಿಚಾರ ಕುರಿತು ಹೇಳಿದ ಅವರು, ನಮ್ಮ ಇಲಾಖೆಯಲ್ಲಿ ಯಾರ ಮೇಲೂ ಒತ್ತಡ ಇಲ್ಲ. ಅದು ಕೆಲವು ವೈಯಕ್ತಿಕ ವಿಚಾರಕ್ಕೆ ನಡೆದಿದೆ. ಒಂದು ಪ್ರಕರಣವನ್ನು ಸಾರ್ವತ್ರಿಕರಣ ಮಾಡುವುದು ಬೇಡ ಎಂದು ರಾಮಲಿಂಗರೆಡ್ಡಿ ತಿಳಿಸಿದರು.

NO COMMENTS

LEAVE A REPLY