ಚಲಿಸುತ್ತಿದ್ದ ಬಸ್ ನಿಂದ ಬಿದ್ದು ಮಹಿಳೆ ಸಾವು

ಚಲಿಸುತ್ತಿದ್ದ ಬಸ್ ನಿಂದ ಬಿದ್ದು ಮಹಿಳೆ ಸಾವು

30
0
SHARE

ಮೈಸೂರು(ನ.14,2017):ಜಿಲ್ಲೆಯ ನಂಜನಗೂಡು ತಾಲ್ಲೂಕು ತಗಡೂರು ಬಳಿ ಖಾಸಗಿ ಬಸ್ಸಿನಲ್ಲಿ ಘಟನೆ ಸಂಭವಿಸಿದೆ.

ಸೋಮಸುಂದರಮ್ಮ (೪೦)ಎಂಬ ಮೃತ ಮಹಿಳೆ, ಖಾಸಗಿ ಬಸ್ ನ ಕಂಡಕ್ಟರ್ ಹಾಗೂ ಚಾಲಕನ‌ ನಿರ್ಲಕ್ಷ್ಯದಿಂದ ಪ್ರಾಣ ಕಳೆದುಕೊಂಡಿದ್ದಾರೆ.ತಾಯಿಯನ್ನ ನೋಡಲು ಶ್ರೀ‌ ನಂಜುಂಡೇಶ್ವರ ಖಾಸಗಿ ಬಸ್ ನಲ್ಲಿ ಪ್ರಯಾಣ ಸಂದರ್ಭದಲ್ಲಿ ನೂಕು‌ನುಗ್ಗಲಿನಿಂದ ಕೆಳಕ್ಕೆ ಬಿದ್ದು ತೀವ್ರ ಗಾಯಗೊಂಡ ಪರಿಣಾಮ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ಬಳಿಕ‌ ಸ್ಥಳದಲ್ಲೇ ಬಸ್ ಬಿಟ್ಟು ಚಾಲಕ, ನಿರ್ವಾಹಕ ಪರಾರಿಯಾಗಿದ್ದಾರೆ.

ರಸ್ತೆಯಲ್ಲಿ ಶವವಿಟ್ಟು ಪೋಷಕರು ಪರಿಹಾರ ನೀಡುವಂತೆ ಪ್ರತಿಭಟನೆ ಮೂಲಕ ಪಟ್ಟು ಇಡಿದಿದ್ದಾರೆ. ಸ್ಥಳಕ್ಕೆ ಕವಲಂದೆ ಪೊಲೀಸರ ಭೇಟಿ ನೀಡಿ ಬಸ್ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

NO COMMENTS

LEAVE A REPLY