ವಿದ್ಯಾರ್ಥಿಗಳಿಗೆ ಚಾಕೋಲೇಟ್ ಹಾಗೂ ಏಲಕ್ಕಿ ಸುವಾಸಿತ ಹಾಲು ನೀಡಲು ಸರ್ಕಾರ ನಿರ್ಧಾರ: ಸಚಿವ ಹೆಚ್.ಸಿ...

ವಿದ್ಯಾರ್ಥಿಗಳಿಗೆ ಚಾಕೋಲೇಟ್ ಹಾಗೂ ಏಲಕ್ಕಿ ಸುವಾಸಿತ ಹಾಲು ನೀಡಲು ಸರ್ಕಾರ ನಿರ್ಧಾರ: ಸಚಿವ ಹೆಚ್.ಸಿ ಮಹದೇವಪ್ಪ

32
0
SHARE

ಮೈಸೂರು(ನ,1,2017): ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕ್ಷೀರ ಭಾಗ್ಯ ಯೋಜನೆಯಲ್ಲಿ  ಶಾಲೆಯ ವಿದ್ಯಾರ್ಥಿಗಳಿಗೆ ವಾರದಲ್ಲಿ 3 ದಿನ ಚಾಕೋಲೇಟ್ ಸುವಾಸಿತ ಹಾಗೂ 2 ದಿನ ಏಲಕ್ಕಿ ಸುವಾಸಿತ ಹಾಲನ್ನು ಮಕ್ಕಳಿಗೆ ನೀಡುವ ಕಾರ್ಯಕ್ರಮಕ್ಕೆ ಮೈಸೂರಿನಲ್ಲಿ  ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ.ಮಹದೇವಪ್ಪ ಅವರು ಇಂದು ಚಾಲನೆ ನೀಡಿದರು

ಈ ಕುರಿತು ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ಶಾಲಾ ಮಕ್ಕಳ ಅಭಿಪ್ರಾಯ ಹಾಗೂ ಬೇಡಿಕೆಯಂತೆ ಚಾಕೊಲೇಟ್ ಮತ್ತು ಏಲಕ್ಕಿ ಸುವಾಸಿತ ಹಾಲು ನೀಡುವ ಯೋಜನೆಯನ್ನು ಪ್ರಾಯೋಗಿಕವಾಗಿ ಮೈಸೂರು ಮತ್ತು ರಾಯಚೂರಿನಲ್ಲಿ ಆರಂಭಿಸಲಾಗಿದೆ ಎಂದರು.

ಮಕ್ಕಳ ಅಪೌಷ್ಠಿಕತೆ ನಿವಾರಣೆ ಮತ್ತು ಉತ್ತಮ ಬೆಳವಣಿಗೆಗೆ ಹಾಲು ನೀಡುವ ಕ್ಷೀರ ಭಾಗ್ಯ ಯೋಜನೆಯನ್ನು ನಮ್ಮ ಸರ್ಕಾರಿ ಆರಂಭಿಸಿದೆ. ಮೊದಲು ವಾರದಲ್ಲಿ ಮೂರು ದಿನ‌ ಕೊಡುತ್ತಿದ್ದೆವು. ಮಕ್ಕಳ ಕೋರಿಕೆಯಂತೆ ಐದು ದಿನಕ್ಕೆ ವಿಸ್ತರಿಸಲಾಯಿತು. ಈಗ ಸುವಾಸಿತ ಹಾಲು ಕೊಡಲು ಆರಂಭಿಸುತ್ತಿದ್ದು ಮಕ್ಕಳು ಹೆಚ್ಚು ಪ್ರೀತಿಯಿಂದ ಸ್ವೀಕರಿಸಿ, ಆರೋಗ್ಯವಂತರಾಗಬೇಕು. ಎಲ್ಲಾ ಮಕ್ಕಳಿಗೂ ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಸಿಗುವುದಿಲ್ಲ. ಇದರಿಂದ ಪೌಷ್ಟಿಕತೆ ಕೊರತೆಯಾಗಿತ್ತು. ಇದನ್ನು ಮನಗಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದು ಕೊರತೆ ನೀಗಿಸಿದ್ದಾರೆ ಎಂದು ಸಚಿವ ಮಹದೇವಪ್ಪ ತಿಳಿಸಿದರು.

NO COMMENTS

LEAVE A REPLY