ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕೆನ್ನುವುದು ನನ್ನ ಮಹದಾಸೆ: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ

ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕೆನ್ನುವುದು ನನ್ನ ಮಹದಾಸೆ: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ

25
0
SHARE

ಬೆಂಗಳೂರು(ಅ,30,2017):  ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎನ್ನುವುದು ನನ್ನ ಆಸೆ. ಇದಕ್ಕೆ ದೇವೇಗೌಡ, ಸಿಂಧ್ಯಾ, ಕುಮಾರಸ್ವಾಮಿ, ಹೊರಟ್ಟಿ ಸೇರಿದಂತೆ‌ ಸಾಕಷ್ಟು ಮುಖಂಡರು ಇದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಜೆಪಿ ಭವನದಲ್ಲಿ ಜೆಡಿಎಸ್ ಕಛೇರಿಯ ವಿಶೇಷ ಪೂಜಾ ಕಾರ್ಯಕ್ರಮ ಇಂದು ನಡೆಯಿತು. ಕಳೆದ ಆರು ತಿಂಗಳ ಹಿಂದೆಯೇ ಹೊಸ ಕಚೇರಿಯ ಪ್ರವೇಶ,ವಿಶೇಷ ಪೂಜೆ ನಡೆದಿತ್ತು. ಆಗ ಇನ್ನೂ ಕಟ್ಟಡದ ಕೆಲಸ ಬಾಕಿ ಇತ್ತು. ಇದೀಗ ಕಟ್ಟಡ ಸಂಪೂರ್ಣಗೊಂಡ ಹಿನ್ನಲೆಯಲ್ಲಿ ಮತ್ತೊಮ್ಮೆ ಪೂಜಾ ಕಾರ್ಯಕ್ರಮ ನಡೆದಿದೆ.

ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಗೌರವಿಸುವ ಸಲುವಾಗಿ ನಡೆದ ಸಮಾರಂಭ ಏರ್ಪಡಿಸಲಾಗಿದ್ದು.ಪೂಜೆಯ ಕಾರ್ಯಕ್ರಮದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ ರೇವಣ್ಣ ಉಪಸ್ಥಿತರಿದ್ದರು. ಪೂಜೆಯ ನಂತರ ಪಕ್ಷದ ವಿವಿಧ ವಿಭಾಗಗಳಿಗೆ ಕೊಠಡಿ ಹಂಚಿಕೆ ಮಾಡಲಾಯಿತು.

ಬಳಿಕ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಸಿಂಧ್ಯ ಮತ್ತು ನನ್ನ ಸ್ನೇಹ 1975ರಲ್ಲಿ ಆರಂಭವಾದದ್ದು. ಆವತ್ತು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾಗಾಂಧಿಯವರು ನಮ್ಮನ್ನ ಜೈಲಿಗೆ ಹಾಕಿದ್ರು. ಕಳೆದ ಹತ್ತಾರು ದಿನಗಳಿಂದ ಸಿಂಧ್ಯ ಅವರಲ್ಲಿ ಮನವಿ ಮಾಡಿದ್ದೆ ಪಕ್ಷದಲ್ಲಿ ಸಕ್ರೀಯರಾಗಿ ಎಂದು ಹೇಳಿದ್ದೆ. ಇಂದು ಕಾಲ ಕೂಡಿ ಬಂದಿದೆ ಎಂದು ಹೇಳಿದರು.

ಜೆಪಿ ಭವನದ ಕಟ್ಟಡದಲ್ಲಿ ಎಲ್ಲ ವಿಭಾಗಕ್ಕೂ ಕೊಠಡಿ ಮೀಸಲಿಡಲಾಗಿದೆ. ಕಚೇರಿಯಲ್ಲಿ ಶಿಸ್ತುಬದ್ದವಾಗಿ ಕೆಲಸ ನಡೆಯಬೇಕು. ಅಸ್ಸೆಂಬ್ಲಿ ಚುನಾವಣೆ ಬಳಿಕ ಸಿಂಧ್ಯ ಮತ್ತು ನಾನು ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡ್ತೇವೆ ಎಂದು ದೇವೇಗೌಡರು ತಿಳಿಸಿದರು.

NO COMMENTS

LEAVE A REPLY